UPSC ಸಾಧಕರು : ಯಾವುದೇ ಕೋಚಿಂಗ್ ಪಡೆಯದೆ 21 ವರ್ಷಕ್ಕೇ IPS ಆದ ಬಡ ಯುವತಿ

VAMAN
0
UPSC ಸಾಧಕರು : ಯಾವುದೇ ಕೋಚಿಂಗ್ ಪಡೆಯದೆ 21 ವರ್ಷಕ್ಕೇ IPS ಆದ ಬಡ ಯುವತಿ ದಿವ್ಯ 

ಐಪಿಎಸ್ ದಿವ್ಯಾ ಬಿಎಸ್ಸಿ ಪಾಸಾದ ನಂತರ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. ತಮ್ಮ ಮನೆಯ ಚಿಕ್ಕ ಕೊಠಡಿಯಲ್ಲಿ 10 ಗಂಟೆಗಳ ಕಾಲ ಓದುವ ಮೂಲಕ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ನಡೆಸಿದ್ದರು

ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯಲ್ಲಿ ಇಂದಿನ ಅತಿಥಿ ಐಪಿಎಸ್ ದಿವ್ಯಾ ತನ್ವರ್. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಾಕೆ ಕೇವಲ 21 ವರ್ಷಕ್ಕೇ ಉನ್ನತ ಪೊಲೀಸ್ ಅಧಿಕಾರಿಯಾಗಿದ್ದಾರೆ. ಅವರ ಯಶಸ್ಸಿನ ಹಾದಿ ಬಗ್ಗೆ ತಿಳಿಯೋಣ ಬನ್ನಿ

ಐಪಿಎಸ್ ದಿವ್ಯಾ ತನ್ವರ್ ಅವರು ಸಾಕಷ್ಟು ಕಷ್ಟಗಳನ್ನು ಮೆಟ್ಟಿನಿಂತು ತಮ್ಮ ಗುರಿಯನ್ನು ಸಾಧಿಸಿದ್ದಾರೆ. ಯುಪಿಎಸ್ ಸಿಯಲ್ಲಿ ತೇರ್ಗಡೆಯಾಗಿ ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗಬೇಕು ಎಂದು ಬಿಎಸ್ ಸಿಯಲ್ಲಿಯೇ ನಿರ್ಧರಿಸಿದ್ದರು. ಐಪಿಎಸ್ ದಿವ್ಯಾ ತನ್ವರ್ ಹೋರಾಟದ ಕಥೆ ಇಲ್ಲಿದೆ.

ಹರಿಯಾಣದ ಮಹೇಂದರ್ ಗಢದಲ್ಲಿ ಹುಟ್ಟಿ ಬೆಳೆದ ದಿವ್ಯಾ ತನ್ವಾರ್ ಕೆಳ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಅವರ ತಂದೆ ದಿವ್ಯಾ ಶಾಲೆಯಲ್ಲಿ ಓದಿತ್ತಿರುವ ಸಮಯದಲ್ಲಿ ನಿಧನರಾದರು. ಇದರಿಂದ ಮನೆಯ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಆದರೂ ಅವರ ತಾಯಿ ಬಬಿತಾ ತನ್ವಾರ್ ಅವರ ಮಗಳ ಅಧ್ಯಯನಕ್ಕೆ ಅಡ್ಡಿಯಾಗಲು ಬಿಡಲಿಲ್ಲ.

ಐಪಿಎಸ್ ದಿವ್ಯಾ ತನ್ವಾರ್ ಅವರು ನವೋದಯ ವಿದ್ಯಾಲಯದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಅವರಿಗೆ ಒಟ್ಟು ಮೂವರು ಒಡಹುಟ್ಟಿದವರಿದ್ದಾರೆ. ಅವರ ತಾಯಿ ಬಬಿತಾ ತನ್ವಾರ್ ಹೊಲಿಗೆ ಮತ್ತು ಕಸೂತಿ ಕೆಲಸ ಮಾಡುವ ಮೂಲಕ ಮಕ್ಕಳು ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡಿದರು.

ಐಪಿಎಸ್ ದಿವ್ಯಾ ಬಿಎಸ್ಸಿ ಪಾಸಾದ ನಂತರ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. ತಮ್ಮ ಮನೆಯ ಚಿಕ್ಕ ಕೊಠಡಿಯಲ್ಲಿ 10 ಗಂಟೆಗಳ ಕಾಲ ಓದುವ ಮೂಲಕ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ನಡೆಸಿದ್ದರು.
ದಿವ್ಯಾ ತನ್ವಾರ್ 2021 ರಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಪಾಸ್ ಆದರು. ಕೇವಲ 21 ನೇ ವಯಸ್ಸಿನಲ್ಲಿ 438ನೇ ರ್ಯಾಂಕ್ ಪಡೆಯುವ ಮೂಲಕ ಐಪಿಎಸ್ ಅಧಿಕಾರಿಯಾದರು.

ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ ಎನ್ನುತ್ತಾರೆ ಐಪಿಎಸ್ ದಿವ್ಯಾ ತನ್ವರ್. ನೀವು ಒಂದು ಗುರಿಯನ್ನು ಹೊಂದಿದ್ದರೆ, ಅದನ್ನು ತಲುಪಲು ನೀವು ಮಾರ್ಗವನ್ನು ಕಂಡುಕೊಳ್ಳಬೇಕು. ಅದನ್ನು ಪಡೆಯಲು ಕಠಿಣ ಪರಿಶ್ರಮ ಅಗತ್ಯ. ಇಂದು ದಿವ್ಯಾ ದೇಶಾದ್ಯಂತ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ.

UPSC SUCCESS STORIES 

Post a Comment

0Comments

Post a Comment (0)