UPSC TOPPER 2022

VAMAN
0
UPSC TOPPER 2022

ಇಶಿತಾ ಕಿಶೋರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಡಿಂಗ್

ಇಶಿತಾ ಕಿಶೋರ್

ನವದೆಹಲಿ: 2022ನೇ ಸಾಲಿನ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶವನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಮಂಗಳವಾರ ಪ್ರಕಟಿಸಿದ್ದು, ದೆಹಲಿಯ ಇಶಿತಾ ಕಿಶೋರ್ ಎಂಬುವವರು ಮೊದಲ ಬ್ಯಾಂಕ್‌ ಪಡೆದಿದ್ದಾರೆ.

ಇಶಿತಾ ಕಿಶೋರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದು, ಅವರ ಸಾಧನೆ ಬಗ್ಗೆ ಅನೇಕರು ಕೊಂಡಾಡಿದ್ದಾರೆ.

ಇಶಿತಾ ಅವರು ದೆಹಲಿ ವಿಶ್ವವಿದ್ಯಾಲಯದ ಶ್ರೀರಾಮ್‌ ಕಾಲೇಜ್‌ ಆಫ್‌ ಕಾಮರ್ಸ್‌ನ ಅರ್ಥಶಾಸ್ತ್ರ ಪದವೀಧರೆ, ಪದವಿ ನಂತರ ಅವರು ಹಣಕಾಸು ಕಂಪನಿಯಲ್ಲಿ ಕೆಲ ವರ್ಷ ಕೆಲಸ ಮಾಡಿದ್ದರು. ಅವರು 2017 ಹಾಗೂ 2019 ರಲ್ಲಿ ಎರಡು ಭಾರಿ ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ್ದರು.

ಆದರೆ, ಆ ಎರಡು ಬಾರಿಯೂ ಪೂರ್ವಭಾವಿ ಪರೀಕ್ಷೆಯನ್ನೇ ಪಾಸ್ ಮಾಡಿರಲಿಲ್ಲ. ಅವರು ಎದೆಗುಂದದೆ ಸತತ ಪರಿಶ್ರಮದಿಂದ ಈ ಸಾರಿ ಯಶಸ್ವಿಯಾಗಿ ಸಂದರ್ಶನ ಎದುರಿಸಿ ಟಾಪರ್ ಆಗಿದ್ದಾರೆ.

'ನಾನು ಕಂಡಿದ್ದು ಒಂದೇ ಕನಸು. ಅದು ಇಂದು ನನಸಾಗಿದೆ' ಎಂದು ಇಶಿತಾ ಕಿಶೋರ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಇದ್ದಾಗ ಉತ್ತಮ ಕ್ರೀಡಾಪಟು ಎಂದು ಕೂಡ ಖ್ಯಾತಿ ಗಳಿಸಿದ್ದರು.

ನಾಗರಿಕ ಸೇವಾ ಪರೀಕ್ಷೆಯಲ್ಲಿ 933 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, ಇದರಲ್ಲಿ 322 ಮಹಿಳೆಯರು ಇದ್ದಾರೆ ಎಂದು ಯುಪಿಎಸ್‌ಸಿ ಹೇಳಿದೆ.

ಗರಿಮಾ ಲೋಹಿಯಾ ಮತ್ತು ಉಮಾ ಹರಿತಿ ಎನ್. ಎಂಬುವವರು ಕ್ರಮವಾಗಿ ಎರಡು ಮತ್ತು ಮೂರನೇ ಬ್ಯಾಂಕ್ ಗಳಿಸಿದ್ದಾರೆ. ದೆಹಲಿಯ ಮಿರಾಂಡಾ ಕಾಲೇಜಿನ ಪದವೀಧರೆ ಸ್ಮತಿ ಮಿಶ್ರಾ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಮೊದಲ ನಾಲ್ಕು ಬ್ಯಾಂಕ್‌ಗಳು ಮಹಿಳಾ ಅಭ್ಯರ್ಥಿಗಳ ಪಾಲಾಗಿವೆ.

ನಾಗರಿಕ ಸೇವೆಗಳ ಪರೀಕ್ಷೆಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ (ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ). ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಸೇರಿದಂತೆ ಐಆರ್‌ಎಸ್, ಕೇಂದ್ರ ಸರ್ಕಾರದ ಗ್ರೂಪ್ ಎ, ಬಿ ಅಧಿಕಾರಿಗಳನ್ನು ಅಯ್ಕೆ ಮಾಡಲಾಗುತ್ತದೆ.

UPSC 2022 TOPPERS 

Post a Comment

0Comments

Post a Comment (0)